- ಏಕೆ ಸುದ್ದಿಯಲ್ಲಿದೆ?: ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತದ ಮುಂಬೈಗೆ ಹಿಂದಿರುಗಿದ ದಿನವನ್ನು ಆಚರಿಸಲು ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸ್ ಅಥವಾ NRI ದಿನವನ್ನು ಔಪಚಾರಿಕವಾಗಿ ಆಚರಿಸಲಾಗುತ್ತದೆ.
- ಭಾರತದ ಅಭಿವೃದ್ಧಿಗೆ ಅನಿವಾಸಿ ಭಾರತೀಯ ಸಮುದಾಯದ ಕೊಡುಗೆಯನ್ನು ಎತ್ತಿ ಹಿಡಿಯಲು ಈ ದಿನವನ್ನು ಆಚರಿಸಲಾಗುತ್ತದೆ.
- ಪ್ರವಾಸಿ ಭಾರತೀಯ ದಿವಸ್ ಮೊದಲು ಬಾರಿಗೆ ಯಾವಾಗ ಪ್ರಾರಂಭವಾಯಿತು?
- ಪ್ರವಾಸಿ ಭಾರತೀಯ ದಿನವನ್ನು ಮೊದಲು 2003 ರಲ್ಲಿ ಭಾರತ ಗಣರಾಜ್ಯದ ಜನರು ಆಚರಿಸಿದರು.
- ಜನವರಿ 7 ರಿಂದ ಜನವರಿ 9 ರವರೆಗೆ ಈ ವರ್ಷದ ಪ್ರವಾಸಿ ಭಾರತೀಯ ದಿವಸ್ ಆಚರಿಸುತ್ತಾರೆ.
- 2023 ರ ಪ್ರವಾಸಿ ಭಾರತೀಯ ದಿನವನ್ನುಅಯೋಜಿಸುತ್ತಿರುವ ನಗರ: ಇಂದೋರ್, ಮಧ್ಯಪ್ರದೇಶ.
- ಪ್ರವಾಸಿ ಭಾರತೀಯ ದಿನ 2023 ರ ಧ್ಯೇಯ ವಾಕ್ಯ/ಥೀಮ್: "Diaspora: Reliable Partners for India's Progress in Amrit Kaal."
- ದೇಶದ ಅಭಿವೃದ್ಧಿಯಲ್ಲಿ ಭಾರತೀಯ ಡಯಾಸ್ಪೊರಾ ಪ್ರಾಮುಖ್ಯತೆಯ ಮೇಲೆ ಥೀಮ್ ಕೇಂದ್ರೀಕರಿಸುತ್ತದೆ. ಈ ದಿನವನ್ನು ಆಚರಿಸಲು ಪ್ರತಿ ವರ್ಷ ಹೊಸ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
- ಎಷ್ಟನೇ ಆವೃತ್ತಿ?: ಇದು 17 ನೇ ಪ್ರವಾಸಿ ಭಾರತೀಯ ದಿವಸ್ ಅಥವಾ ಎನ್‌ಆರ್‌ಐ ದಿನವಾಗಿದೆ.
- ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಯಾರು?: ಡಾ. ಮೊಹಮ್ಮದ್ ಇರ್ಫಾನ್ ಅಲಿ.
|ಕಲೆ ಮತ್ತು ಸಂಸ್ಕೃತಿ ಪ್ರಚಲಿತ ವಿದ್ಯಮಾನಗಳು (Art and Culture Current Affairs)|ಜನವರಿ 2023 ಪ್ರಚಲಿತ ವಿದ್ಯಮಾನಗಳು(January 2023 Current Affairs)|ಸುದ್ದಿಯಲ್ಲಿರುವ ಸರ್ಕಾರದ ಯೋಜನೆಗಳು (Government Schemes in News)| ರಾಷ್ಟ್ರ ಮತ್ತು ರಾಜ್ಯಗಳ ಪ್ರಚಲಿತ ವಿದ್ಯಮಾನಗಳು (National and States Current Affairs)|