- ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಲಷ್ಕರ್-ಎ-ತೈಬಾದ (ಎಲ್‌ಇಟಿ) ಸಂಘಟನೆಯ ಭಾಗವಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಭಯೋತ್ಪಾದಕ ಸಂಘಟನೆ ಎಂದು ಗೃಹ ಸಚಿವಾಲಯ ಘೋಷಿಸಿದೆ.
- ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿಯ ಪ್ರಾಕ್ಸಿ ಆಗಿ 2019 ರಲ್ಲಿ ಟಿಆರ್‌ಎಫ್ ಅಸ್ತಿತ್ವಕ್ಕೆ ಬಂದಿದೆ ಎಂದು ಗೆಜೆಟ್ ಅಧಿಸೂಚನೆ ಹೇಳಿದೆ.
- "ಜಮ್ಮು ಮತ್ತು ಕಾಶ್ಮೀರದ ಜನರನ್ನು ಭಾರತೀಯ ರಾಜ್ಯದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರಚೋದಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಮಾನಸಿಕ ಕಾರ್ಯಾಚರಣೆಗಳಲ್ಲಿ TRF ತೊಡಗಿಸಿಕೊಂಡಿದೆ" ಎಂದು ಗೃಹ ಸಚಿವಾಲಯ ಹೇಳಿದೆ.
- ಶೇಖ್ ಸಜ್ಜದ್ ಗುಲ್ ಅವರು ಟಿಆರ್‌ಎಫ್(TRF)ನ ಕಮಾಂಡರ್ ಆಗಿದ್ದು, ಯುಎಪಿಎ (UAPA) ಅಡಿಯಲ್ಲಿ ಭಯೋತ್ಪಾದಕ ಎಂದು ಗುರುತಿಸಲಾಗಿದೆ.
- ಯುಎಪಿಎ (UAPA) ಯ ಮೊದಲ ಶೆಡ್ಯೂಲ್ ಭಯೋತ್ಪಾದಕ ಸಂಘಟನೆಗಳ ಪಟ್ಟಿಯನ್ನು ಒಳಗೊಂಡಿದೆ.
ಸುದ್ದಿ ಮೂಲ:The Hindu