- ಬ್ರೆಜಿಲ್‌ನಲ್ಲಿ ಸಾವಿರಾರು ಗಲಭೆಕೋರರು ಅಧ್ಯಕ್ಷೀಯ ಭವನ, ಸುಪ್ರೀಂ ಕೋರ್ಟ್ ಮತ್ತು ಕಾಂಗ್ರೆಸ್‌ಗೆ ನುಗ್ಗಿ, ತಾವು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ.
- ಅಕ್ಟೋಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಜೈರ್ ಬೋಲ್ಸನಾರೊ ಅವರನ್ನು ಸೋಲಿಸಿದ್ದರು.
- ಪ್ರಸ್ತುತ ಬ್ರೆಜಿಲ್ ಅಧ್ಯಕ್ಷ ಲೂಲಾ ಗಲಭೆಕೋರರನ್ನು "ಮತಾಂಧ ಫ್ಯಾಸಿಸ್ಟ್" ಎಂದು ಕರೆದಿದ್ದಾರೆ.
- ಬ್ರೆಜಿಲ್ ಬಗ್ಗೆ
- ಬ್ರೆಜಿಲ್, ದಕ್ಷಿಣ ಅಮೇರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ದೊಡ್ಡ ದೇಶವಾಗಿದೆ.
- ಬ್ರೆಜಿಲ್ ವಿಸ್ತೀರ್ಣದಲ್ಲಿ ವಿಶ್ವದ ಐದನೇ ಅತಿ ದೊಡ್ಡ ದೇಶ ಮತ್ತು ಏಳನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. (ಪ್ರದೇಶ ಮತ್ತು ಜನಸಂಖ್ಯೆಯ ಪ್ರಕಾರ ದೊಡ್ಡ ದೇಶಗಳನ್ನು ತಿಳಿಯಿರಿ)
- ಬ್ರೆಜಿಲ್ ಇರುವ ಖಂಡ: ದಕ್ಷಿಣ ಅಮೇರಿಕಾ ಖಂಡ
- ರಾಜಧಾನಿ: ಬ್ರೆಸಿಲಿಯಾ
- ದೊಡ್ಡ ನಗರ: ಸಾವೊ ಪಾಲೊ
- ಶಾಸಕಾಂಗ: ರಾಷ್ಟ್ರೀಯ ಕಾಂಗ್ರೆಸ್
- ಕರೆನ್ಸಿ: ರಿಯಲ್
- ಪ್ರಸ್ತುತ ಬ್ರೆಜಿಲ್ ಅಧ್ಯಕ್ಷ: ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ