- ಏಕೆ ಸುದ್ದಿಯಲ್ಲಿದೆ?: 2023 ರ ಜನವರಿ 13 ರಂದು ವಾರಣಾಸಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ಅತಿ ಉದ್ದದ ನದಿ ವಿಹಾರ ಎಂವಿ ಗಂಗಾ ವಿಲಾಸ್ ಅನ್ನು ಪ್ರಾರಂಭಿಸುವುದರ ಮೂಲಕ ಭಾರತದಲ್ಲಿ ನದಿ ವಿಹಾರ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದ್ದಾರೆ.
- ಈ ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳಲ್ಲಿ 27 ನದಿ ವ್ಯವಸ್ಥೆಗಳ ಮೂಲಕ 3,200 ಕಿಮೀ ದೂರವನ್ನು ಕ್ರಮಿಸುತ್ತದೆ.
- ಈ ಐಷಾರಾಮಿ ಕ್ರೂಸ್ ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ.
- ಮೊದಲ ಬ್ಯಾಚ್ ಪ್ರವಾಸಿಗರು ಸ್ವಿಟ್ಜರ್ಲೆಂಡ್‌ನಿಂದ ಬರುತ್ತಾರೆ.
- ಗಂಗಾ ನದಿಯ ಬಗ್ಗೆ
- ಉಗಮ ಸ್ಥಾನ: ಇದು ಉತ್ತರಾಖಂಡದ ಗಂಗೋತ್ರಿ ಮತ್ತು ಖತಿಲಾಂಗ್ ಹಿಮನದಿಗಳ ತಳದಲ್ಲಿರುವ ಗೌಮುಖದಲ್ಲಿ ಭಾಗೀರಥಿ ನದಿಯ ಹೆಸರುನೊಂದಿಗೆ ಉಗಮವಾಗುತ್ತದೆ.
- ಭಾರತದ ರಾಷ್ಟ್ರೀಯ ನದಿ ಗಂಗಾ ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿಯುತ್ತದೆ
- ನಾಲ್ಕು ವೇದಗಳಲ್ಲಿ ಒಂದಾದ ಋಗ್ವೇದದಲ್ಲಿ ಗಂಗಾ ನದಿ ಯನ್ನು ಉಲ್ಲೇಖಿಸಲಾಗಿದೆ
ಸುದ್ದಿ ಮೂಲ:PIB